
26th August 2024
ಕೊಪ್ಪಳ. ಅತಿ ಶೀಘ್ರದಲ್ಲೇ ಪತ್ರಕರ್ತರಿಗೆ ನಿವೇಶನದ ಹಕ್ಕು ಪತ್ರ ವಿತರಿಸಲಾಗುವುದು ಅದು ನಾನೇ ಪತ್ರಕರ್ತರಿಗೆ ಹಕ್ಕು ಪತ್ರ ವಿತರಿಸುವ ಅವಕಾಶ ಒದಗಿಬಂದಿರುವುದು ತಮ್ಮ ಸೌಭಾಗ್ಯ ಎಂದು ಕೊಪ್ಪಳ ನಗರಸಭೆಯ ನೂತನ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಅವರು ಭಾನುವಾರ ನಗರದ ಸಾಹಿತ್ಯ ಭವನದಲ್ಲಿ ಸುವರ್ಣ ಕರ್ನಾಟಕ ಪತ್ರಕರ್ತರ ಸಂಘ(ರಿ)ಬೆAಗಳೂರು ಇದರ ಕೊಪ್ಪಳ ಜಿಲ್ಲಾ ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ-೨೦೨೪ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ ಜಗತ್ತಿನ ಇತಿಹಾಸದಲ್ಲಿ ಪತ್ರಿಕೋದ್ಯಮ ತನ್ನದೆಯಾದ ಪಾತ್ರ ನಿರ್ವಹಿಸುತ್ತಿದ್ದು, ಸರಕಾರ ಮತ್ತು ಜನರ ನಡುವಿನ ಸಂಪರ್ಕ ಕೊಂಡಿಯಾಗಿಯೂ ಪತ್ರಿಕೋದ್ಯಮ ತನ್ನದೆಯಾದ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುವ ಕೊಪ್ಪಳದ ಪತ್ರಕರ್ತರಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ತಮ್ಮ ನಗರಸಭೆ ಕಾರ್ಯೋನ್ಮುಖವಾಗಿದ್ದು ಶೀಘ್ರದಲ್ಲೇ ಪತ್ರಕರ್ತರಿಗೆ ನಿವೇಶನ ಭಾಗ್ಯ ದೊರೆಯಲಿದೆ ಎಂದು ಸುಳಿವು ನೀಡಿದ ಅವರು ತಾವು ನಗರಸಭೆ ಸದಸ್ಯನಾಗುವ ಮುನ್ನ ಪತ್ರಕರ್ತನಾಗಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊAಡರು.
ಪತ್ರಕರ್ತ ವೃತ್ತಿ ಪವಿತ್ರವಾಗಿದ್ದು, ಇತ್ತೀಚೆಗೆ ಪತ್ರಿಕೋದ್ಯಮಕ್ಕೆ ಯುವ ಪತ್ರಕರ್ತರು ಪತ್ರಿಕಾ ರಂಗಕ್ಕೆ ಬರುತ್ತಿರುವುದು ಗುಣಾತ್ಮಕ ಬೆಳವಣಿಗೆ ಎಂದ ಅವರು, ಗ್ರಾಮೀಣ ಭಾಗದ ಪತ್ರಕರ್ತರಿಗೆ ಭದ್ರತೆ ಒದಗಿಸಲು ಸುವರ್ಣ ಕರ್ನಾಟಕ ಪತ್ರಕರ್ತರ ಸಂಘ ಹೆಚ್ಚಿನ ಒತ್ತು ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಮಾತನಾಡಿ, ಕೊಪ್ಪಳದ ಅಭಿವೃದ್ಧಿ ವಿಷಯದಲ್ಲಿ ಸ್ಥಳೀಯ ಪತ್ರಕರ್ತರು ಹಾಗೂ ಸಂಪಾದಕರ ಪಾತ್ರ ಬಹುದೊಡ್ಡದು ಎಂದ ಅವರು, ಇತ್ತೀಚೆಗೆ ಕೊಪ್ಪಳದ ಸಮಗ್ರ ಅಭಿವೃದ್ಧಿ ಏರುಗತಿಯಲ್ಲಿ ಸಾಗಿರುವುದು ತಮಗೆ ಸಂತಸ ತಂದಿದ್ದು, ಕೊಪ್ಪಳ ನಗರಸಭೆಯ ನೂತನ ಅಧ್ಯಕ್ಷ ಅಮ್ಜದ್ ಪಟೇಲರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಹಾಗೂ ನಗರದ ಪ್ರಮುಖ ರಸ್ತೆಗಳ ಬದಿ ಮಹಿಳೆಯರಿಗೆ, ಪುರಿಷರಿಗೆ ಶೌಚಾಲಯ, ಮೂತ್ರಾಲಯಗಳನ್ನು ಸ್ಥಾಪಿಸಲು ಮೊದಲ ಆಧ್ಯತೆ ನೀಡಬೇಕೆಂದು ಸಲಹೆ ನೀಡಿದ ಅವರು, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ತಮ್ಮ ಶಿಷ್ಯ ಎನ್ನುವುದಕ್ಕೆ ತಮಗೆ ಅತೀವ ಹೆಮ್ಮೆ ಇದೆ ಎಂದರು.
ಯುವ ವಕೀಲ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಫೌಂಡೇಶನ್ ಫಾರ್ ರೂರಲ್ ವೆಲ್ಫೇರ್ & ಎಜ್ಯುಕೇಶನ್ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಹಾದಿಮನಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ದೇಶದ ಮೂರು ಆಧಾರ ಸ್ಥಂಭಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಯಲ್ಲೇ ಪತ್ರಿಕಾಂಗವೂ ನಾಲ್ಕನೇ ಆಧಾರ ಸ್ಥಂಭವಾಗಿ ಕಾರ್ಯನಿರ್ವಹಿಸುತ್ತಿದ್ದು, ದೇಶದ ಅಭಿವೃದ್ಧಿ ವಿಷಯದಲ್ಲಿ ಪತ್ರಿಕಾರಂಗದ ಸೇವೆ ಅನನ್ಯ ಎಂದು ಅವರು ಪತ್ರಿಕಾರಂಗದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆ ಮೇಲೆ ನಾಟಕ ಅಕಾಡೆಮಿ ಸದಸ್ಯ, ಹಿರಿಯ ರಂಗಕರ್ಮಿ ಕೊಟ್ರಯ್ಯಸ್ವಾಮಿ ಹುಲಿಗಿ, ಹಿರಿಯ ಪತ್ರಕರ್ತ ಮಹೇಶ ಬಾಬು ಸುರ್ವೆ, ನಾಗರಿಕರ ವೇದಿಕೆಯ ಗೌರವ ಅಧ್ಯಕ್ಷ ಎಂ.ಬಿ.ಅಳವAಡಿ, ಹಿರಿಯ ಪತ್ರಕರ್ತ ಬಸವರಾಜ ಗಡಾದ, ರಾಜ್ಯ ಉಪಾಧ್ಯಕ್ಷೆ ಲಲಿತಾ ಪೂಜಾರ, ರಾಜ್ಯ ಕಾರ್ಯದರ್ಶಿ ರಮೇಶ ಪವಾರ್, ಜಿಲ್ಲಾಧ್ಯಕ್ಷ ಬಸವರಾಜ ಮರದೂರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಂಘದ ರಾಜ್ಯಾಧ್ಯಕ್ಷ ವೈ.ಬಿ.ಜೂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಕರ್ತೆ ಹುಲಿಗೆಮ್ಮ ಗಿಣಿಗೇರಿ ಹಾಗೂ ನಿವೃತ್ತ ಶಿಕ್ಷಕ ಉಮೇಶ ಸುರ್ವೆ ಕಾರ್ಯಕ್ರಮ ನಿರೂಪಿಸಿದರು.
undefined
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ